Feb.09, 2018: Indian Catholic Youth Movement (ICYM), Central Council in collaboration with ICYM Kinnigoli deanery is all set to organize ‘Diaference – 2018’, at the Pakshikere Church Grounds on 11th February 2018. Nearly 2000 youth from 117 parishes of Mangalore Diocese will attend the program this youth conference which is held on the theme ‘Youth to witness Christ at Society’s different walks of life’. The conference will commence with a ‘Peace Rally’ flagged of by Rev. Fr. Andrew Leo D’Souza at 8.30 a.m. from Pakshikere Bus Stand to Pakshikere Church Grounds which will be followed by the inauguration at 9.30 a.m. Msgr. Denis Moras Prabhu, Vicar General of Mangalore Diocese will preside over the inaugural program with Lt. Col Gracian Sequeira as the Chief Guest.

 

 

ICYM Diaference 2018 Logo

Most. Rev. Dr Aloysius Paul D’Souza, Bishop of Mangalore will preside over the valedictory ceremony. Eminent NRI Entrepreneur Mr. James Mendonca will grace the occasion as the Chief Guest. Rev. Fr. Vincent Monteiro - Vicar Forane of Kinnigoli Deanery, Fr. Chethan Machado - Secretary CCBI Youth Commission, Fr. Anil D’Sa – Karnataka Regional Youth Director and Mr. Raymond D’Souza – ICYM National Governing Council member will be the guests of honour. The Central Council of ICYM Mangalore Diocese under the leadership of the Director Rev. Fr. Ronald Prakash D’Souza, President Elroy Saldanha, Secretary Joel Concessao and other council members will host ‘Diaference - 2018’ at Pakshikere Church Grounds in collaboration with ICYM Kinnigoli Deanery led by Director - Fr. Clifford Pinto, President – Preema Pinto, Secretary – Jenifer Saldanha and deanery committee. The highlights of the conference are panel discussions on the theme, Holy Eucharistic celebration and cultural programs depicting the Konkani culture.


ಭಾರತೀಯ ಕಥೊಲಿಕ ಯುವ ಸಂಚಲನ ಮಂಗಳೂರು ಧರ್ಮಪ್ರಾಂತ್ಯ ಡಯಾಫರೆನ್ಸ್ – 2018

ಭಾರತೀಯ ಕಥೊಲಿಕ ಯುವ ಸಂಚಲನ ಮಂಗಳೂರು ಧರ್ಮಪ್ರಾಂತ್ಯದ ಕೇಂದ್ರಿಯ ಸಮಿತಿಯು, ಐಸಿವೈಎಮ್ ಕಿನ್ನಿಗೋಳಿ ವಲಯದ ಸಹಯೋಗದೊಂದಿಗೆ 11.02.2018 ಆದಿತ್ಯವಾರದಂದು “ಡಯಾಫರೆನ್ಸ್ – 2018” ಎಂಬ ಕಾರ್ಯಕ್ರಮವನ್ನು ಪಕ್ಷಿಕೆರೆ ಧರ್ಮಕೇಂದ್ರದಲ್ಲಿ ಹಮ್ಮಿಕೊಂಡಿದೆ. “ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಕ್ರಿಸ್ತನಿಗೆ ಸಾಕ್ಷಿಕೊಡುವ ಯುವಜನರು” ಎಂಬ ವಿಷಯದ ಮೇಲೆ ಅಧಿವೇಶನವನ್ನು ನಡೆಸಲಾಗುವುದು. ಮಂಗಳೂರು ಧರ್ಮಪ್ರಾಂತ್ಯದ 117 ಧರ್ಮಕೇಂದ್ರಗಳಿಂದ ಸರಿಸುಮಾರು 2000 ಯುವಜನರು ಈ ಯುವಸಮ್ಮೇಳನದಲ್ಲಿ ಭಾಗವಹಿಸುವರು. ಬೆಳಿಗ್ಗೆ 8.45 ಗಂಟೆಗೆ ಪಕ್ಷ್ಷಿಕೆರೆ ಬಸ್ಸು ತಂಗುದಾಣದಿಂದ ಪಕ್ಷಿಕೆರೆ ಚರ್ಚ್‍ಗೆ ಶಾಂತಿ ನಡಿಗೆಯು ಆರಂಭಗೊಳ್ಳುವುದು. ವಂದನೀಯ ಸ್ವಾಮಿ ಆಂಡ್ಯ್ರು ಲಿಯೊ ಡಿ'ಸೋಜ ಈ ಶಾಂತಿ ನಡಿಗೆಗೆ ಚಾಲನೆ ನೀಡುವರು. 9.30 ಗಂಟೆಗೆ ಉದ್ಘಾಟನಾ ಸಮಾರಂಭವನ್ನು ನಡೆಸಲಾಗುವುದು. ಮಂಗಳೂರು ಧರ್ಮಪ್ರಾಂತ್ಯದ Vicar General ವಂದನೀಯ ಡೆನಿಸ್ ಮೊರಾಸ್ ಪ್ರಭುರವರು ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ವಹಿಸುವರು. ಮುಖ್ಯ ಅತಿಥಿಯಾಗಿ Lt. Col Gracian Sequeira ಇವರು ಆಗಮಿಸುವರು.

ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಮಂಗಳೂರು ಧರ್ಮಪ್ರಾಂತ್ಯದ ಧರ್ಮಧ್ಯಕ್ಷರಾದ ಪರಮಪೂಜ್ಯ ಅಲೋಶಿಯಸ್ ಪಾವ್ಲ್ ಡಿ’ಸೋಜರವರು ವಹಿಸುವರು. ಮುಖ್ಯ ಅತಿಥಿಯಾಗಿ ಅನಿವಾಸಿ ಉದ್ಯಮಿ ಶ್ರೀ ಜೇಮ್ಸ್ ಮೆಂಡೊನ್ಸಾರವರು ಉಪಸ್ಥಿತರಿರುವರು. ಕಿನ್ನಿಗೋಳಿ ವಲಯದ Vicar Forane ವಂದನೀಯ ಗುರು ವಿನ್ಸೆಂಟ್ ಮೊಂತೇರೊ, ವಂದನೀಯ ಸ್ವಾಮಿ ಚೇತನ್ ಮಚಾದೊ Secretary CCBI Youth Commission, ವಂದನೀಯ ಸ್ವಾಮಿ ಅನಿಲ್ ಡೆಸಾ ಕರ್ನಾಟಕ ಪ್ರಾಂತ್ಯದ ಯುವ ನಿದೇಶಕರು,ರೈಮಂಡ್ ಡಿ'ಸೋಜ Member ICYM National Council ಕಾರ್ಯಕ್ರಮದ ಅತಿಥಿಯಾಗಿ ಭಾಗವಹಿಸುವರು. ಮಂಗಳೂರು ಧರ್ಮಪ್ರಾಂತ್ಯದ ಐಸಿವೈಎಮ್ ನಿರ್ದೇಶಕರಾದ ವಂದನೀಯ ಸ್ವಾಮಿ ರೊನಾಲ್ಡ್ ಪ್ರಕಾಶ್ ಡಿ’ಸೋಜ, ಐಸಿವೈಎಮ್ ಕೇಂದ್ರಿಯ ಸಮಿತಿಯ ಅಧ್ಯಕ್ಷ ಶ್ರೀ ಎಲ್‍ರೊಯ್ ಸಲ್ಡಾನ್ಹಾ, ಕಾರ್ಯದರ್ಶಿ ಶ್ರೀ ಜೊಯೆಲ್ ಕೊನ್ಸೆಸೊ, ಕೇಂದ್ರಿಯ ಸಮಿತಿಯ ಸದಸ್ಯರ ಮುಂದಾಳತ್ವದಲ್ಲಿ ಹಾಗೂ ಕಿನ್ನಿಗೋಳಿ ವಲಯದ ಐಸಿವೈಎಮ್ ನಿರ್ದೇಶಕರಾದ ವಂದನೀಯ ಸ್ವಾಮಿ ಕ್ಲಿಫರ್ಡ್ ಪಿಂಟೊ, ಐಸಿವೈಎಮ್ ವಲಯ ಅಧ್ಯಕ್ಷೆ ಕು|ಪ್ರೀಮಾ ಪಿಂಟೊ, ಕಾರ್ಯದರ್ಶಿ ಕು|ಜೆನಿಫರ್ ಸಲ್ಡಾನ್ಹಾ ಹಾಗೂ ಐಸಿವೈಎಮ್ ವಲಯ ಸಮಿತಿ ಇವರ ಸಹಯೋಗದೊಂದಿಗೆ ಪಕ್ಷಿಕೆರೆ ಧರ್ಮಕೇಂದ್ರದಲ್ಲಿ “ಡಯಾಫರೆನ್ಸ್ – 2018” ಕಾರ್ಯಕ್ರಮವು ನಡೆಯಲಿರುವುದು. ಈ ಒಂದು ದಿನದ ಕಾರ್ಯಕ್ರಮದಲ್ಲಿ, ಅಧಿವೇಶನ, ವಿಚಾರವಿನಿಮಯ, ಚರ್ಚಾಕೂಟ, ಬಲಿಪೂಜೆ, ಕೊಂಕಣಿ ಸಂಸ್ಕøತಿಯನ್ನು ಬಿಂಬಿಸುವ ಸಾಂಸ್ಕøತಿಕ ಕಾರ್ಯಕ್ರಮಗಳು ಜರಗಲಿರುವುದು.

 

Comments powered by CComment

Home | About | News | Sitemap | Contact

Copyright ©2013 www.icymmangalore.com. Powered by eCreators

Director:
Rev Fr Ashwin Lohith Cardoza
Yuvajyothi, Olivet House 
Jeppu, Mangaluru - 575002
Phone: +91 824 2415217, 2415218
Mobile: +91 8277937787